ಅಧ್ಯಕ್ಷರ ಭಾಷಣ
ದಿನಾಂಕ: 01.09.2024 ರಂದು 2023-24ರ ವಾರ್ಷಿಕ ಸಾಮಾನ್ಯ ಸಭೆಯ Video Conference and
Virtual Meeting ನಲ್ಲಿ ಅಧ್ಯಕ್ಷರು ಮಾಡಿದ ಪ್ರಸ್ತಾವಿಕ ಹಾಗು ಸ್ವಾಗತ ಭಾಷಣದ ವಿವರಗಳು.

12ನೇ ವಾರ್ಷಿಕ ಸಾಮಾನ್ಯ ಸಭೆ

  1. ನವಕಲ್ಯಾಣ ಕರ್ನಾಟಕ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿಯಮಿತ ಇದರ ಹನ್ನೆರಡನೇ ವಾರ್ಷಿಕ ಸಾಮಾನ್ಯ ಸಭೆಗೆ ಭಾಗವಹಿಸಿದ ಎಲ್ಲಾ ಸದಸ್ಯರನ್ನು ಹಾಗೂ ಆನ್‌ಲೈನ್‌ನಲ್ಲಿ ಭಾಗವಹಿಸಿದ ಎಲ್ಲಾ ಸದಸ್ಯರನ್ನು ನಾನು ಅತ್ಯಂತ ಆತ್ಮೀಯವಾಗಿ ಸ್ವಾಗತಿಸುತ್ತೇನೆ. ನಮ್ಮ ಸಹಕಾರಿಯು 2012ರ ಸಾಲಿನಲ್ಲಿ ಪ್ರಾರಂಭಗೊoಡು, ಪ್ರಸ್ತುತ ಹನ್ನೆರಡು ವರ್ಷಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಹದಿಮೂರನೇ ವರ್ಷದಲ್ಲಿ ಮುನ್ನಡೆಯುತ್ತಿದೆ. ಕಳೆದ ಹನ್ನೆರಡು ವರ್ಷಗಳಲ್ಲಿ ನಿಮ್ಮ ಸಹಕಾರಿಯು ಎಲ್ಲಾ ಸದಸ್ಯರ ಪ್ರೀತಿ, ವಿಶ್ವಾಸ, ಅಭಿಮಾನ ಹಾಗೂ ಸಹಕಾರದಿಂದ ವರ್ಷದಿಂದ ವರ್ಷಕ್ಕೆ ಎಲ್ಲಾ ಆರ್ಥಿಕ ವಿಷಯಗಳಲ್ಲಿ ಉತ್ತಮವಾದ ಬೆಳವಣಿಗೆಯನ್ನು ದಾಖಲಿಸಿದೆ. ಹಿಂದಿನ ವರ್ಷಕ್ಕೆ ಹೋಲಿಸಿದಲ್ಲಿ ನಮ್ಮ ಸಹಕಾರಿಯು ಎಲ್ಲಾ ಪ್ರಮುಖ ಹಣಕಾಸು ವಿಷಯಗಳಲ್ಲಿ ಬೆಳವಣಿಗೆಯನ್ನು ಸಾಧಿಸಿರುವುದನ್ನು ಗುರುತಿಸಬಹುದು.
  2. ದಿನಾಂಕ: 10.09.2023 ರಂದು ನಡೆದ ಸಹಕಾರಿಯ ಹನ್ನೊಂದನೇ ವಾರ್ಷಿಕ ಸಾಮಾನ್ಯ ಸಭೆಯ ನಡವಳಿಗಳು ಹಾಗೂ ದಿನಾಂಕ:31.03.2024ಕ್ಕೆ ಅಂತ್ಯಗೊoಡ ಲೆಕ್ಕ ಪರಿಶೋಧಕರ ವರದಿ ಹಾಗೂ ಸದರಿ ಸಾಲಿನ ಹಣಕಾಸು ತ:ಖ್ತೆಗಳನ್ನು ಮತ್ತು ವಾರ್ಷಿಕ ವರದಿಯನ್ನು ಈಗಾಗಲೇ ತಮಗೆ ಇ-ಮೇಲ್ ಮುಖಾಂತರ ಕಳುಹಿಸಲಾಗಿದ್ದ್ದು, ಅವುಗಳನ್ನು ಓದಿರುವಿರೆಂದು ನಾನು ಭಾವಿಸುತ್ತೇನೆ.
  3. ತಾವೆಲ್ಲರೂ ಸಹಕಾರಿಯ ಪ್ರಸ್ತುತ ವಾರ್ಷಿಕ ಆಡಳಿತ ಮಂಡಳಿ ವರದಿ ಹಾಗೂ ದಿನಾಂಕ:31.03.2024ಕ್ಕೆ ಹಣಕಾಸು ತ:ಖ್ತೆಗಳನ್ನು ಗಮನಿಸಿರಬಹುದೆಂದು ಭಾವಿಸುತ್ತೇನೆ. ಕಳೆದ ಹನ್ನೆರಡು ವರ್ಷಗಳಲ್ಲಿ ನಮ್ಮ ಸಹಕಾರಿಯು ಹೆಚ್ಚಿನ ಸಂಪನ್ಮೂಲಗಳನ್ನು ಕ್ರೋಡಿಕರಿಸುವುದರ ಜೊತೆಗೆ, ತನ್ನ ಸದಸ್ಯರಿಗೆ ಸಾಲ ಹಾಗೂ ಮುಂಗಡಗಳ ಮೂಲಕ ಅವರ ಆರ್ಥಿಕ ಅವಶ್ಯಕತೆಗಳನ್ನು ಪೂರೈಸಲು ಸಾಕಷ್ಟು ಯೋಜನೆಗಳನ್ನು ಹಮ್ಮಿಕೊಂಡಿರುವುದನ್ನು ಮಾನ್ಯ ಸದಸ್ಯರು ಗಮನಿಸಲು ಕೋರುತ್ತೇನೆ. ಈ ಬಗ್ಗೆ ಅಂಕಿ ಅಂಶಗಳ ವಿವರ ಹಾಗೂ ಟಿಪ್ಪಣಿಗಳನ್ನು ಆಡಳಿತ ಮಂಡಳಿಯ ವರದಿಯಲ್ಲಿ ವಿವರವಾಗಿ ತಿಳಿಸಲಾಗಿದೆ. ಪ್ರಸ್ತುತ ವರ್ಷದಲ್ಲಿ ಠೇವಣಿಯ ಬೆಳವಣಿಗೆ ಹಾಗೂ ಸಾಲಗಳ ವಿತರಣೆಯಲ್ಲಿ ಹೆಚ್ಚು ಪ್ರಗತಿ ಹೊಂದಲಾರದನ್ನು ತಾವು ಗಮನಿಸಿರಬಹುದು. ಇದೊಂದು ಕಾರ್ಯತಂತ್ರದ (Strategic) ಹೆಜ್ಜೆಯಾಗಿದ್ದು, ಮುಂದಿನ ದಿನಗಳಲ್ಲಿ ಉತ್ತಮ ಬೆಳವಣಿಗೆ ಕಾಣಬಹುದು. ಆದರೆ, ಸಹಕಾರಿಯ ಷೇರು ಬಂಡವಾಳ, ಹೂಡಿಕೆಗಳು, ದುಡಿಯುವ ಬಂಡವಾಳ, ಲಾಭಾಂಶ ಹಾಗು ಒಟ್ಟು ವ್ಯವಹಾರದಲ್ಲಿ ಸಕಾರಾತ್ಮಕ ಬೆಳವಣಿಗೆ ಸಾಧಿಸಿರುವುದನ್ನು ಗುರುತಿಸಬಹುದಾಗಿದೆ. ಮೇಲೆ ತಿಳಿಸಿದ ಸಕಾರಾತ್ಮಕ ಬೆಳವಣಿಗೆಗೆ ಸದಸ್ಯರ ಸಕ್ರೀಯ ಸಹಕಾರ, ಆಡಳಿತ ಮಂಡಳಿ ಸದಸ್ಯರ ಹಾಗೂ ಸಹಕಾರಿಯ ಸಿಬ್ಬಂದಿಯ ಸಂಪೂರ್ಣ ಸಹಕಾರದಿಂದ ಈ ಪ್ರಗತಿಯನ್ನು ಸಾಧಿಸಲಾಗಿದೆಯೆಂದು ಅಭಿಮಾನ ಪೂರ್ವಕವಾಗಿ ಹೇಳಲು ಅಪೇಕ್ಷಿಸುತ್ತೇನೆ.
  4. 2023-24ನೇ ಸಾಲಿನಲ್ಲಿ ಸಾಲ ವಿತರಣೆಯ ವಿಷಯದಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ವಹಿಸಲಾಗಿದೆ ಹಾಗೂ ವಸೂಲಾತಿ ಬಗ್ಗೆ ಕಾನೂನು ಕ್ರಮಗಳು ಸೇರಿದಂತೆ ಬಹಳಷ್ಟು ಕ್ರಮಗಳನ್ನು ಕೈಗೊಂಡು, ಸಾಲ ಖಾತೆಗಳನ್ನು ಸುಸ್ಥಿತಿಯಲ್ಲಿಡುವ ಪ್ರಯತ್ನ ಮಾಡಲಾಗಿದೆ ಮತ್ತು ಸತತ ಪ್ರಯತ್ನದಿಂದ ಕೆಲವು ಸಾಲಗಾರರಿಂದÀ ಏಕ ಕಾಲಿಕ ತೀರುವಳಿಯಲ್ಲಿ ಸಾಲ ವಸೂಲಾತಿ ಮಾಡಿ ಕೆಲ ಸುಸ್ತಿ ಸಾಲ ಖಾತೆಗಳನ್ನು ಚುಕ್ತಗೊಳಿಸಲಾಗಿದೆ. 2023-24ನೇ ಸಾಲಿನಲ್ಲಿ ಠೇವಣಿಗಳ ಮೇಲಿನ ಬಡ್ಡಿ ದರಗಳಲ್ಲಿ ಯಥಾಸ್ಥಿತಿ ಕಾಯ್ದುಕೊಂಡು ವ್ಯವಹಾರಿಕ ಖರ್ಚುಗಳನ್ನು ಹಾಗೂ ಆಡಳಿತಾತ್ಮಕ ವೆಚ್ಚಗಳನ್ನು ಹತೋಟಿಯಲ್ಲಿಡಲಾಗಿದೆೆ. ಪರಿಣಾಮವಾಗಿ, 2022-23ರ ಸಾಲಿಗಿಂತ 2023-24ರ ಸಾಲಿನಲ್ಲಿ ನಿವ್ವಳ ಲಾಭದಲ್ಲಿ ಸ್ವಲ್ಪ ಮಟ್ಟಿಗೆ ಹೆಚ್ಚಿಗೆ ಲಾಭಗಳಿಸಿರುವುದನ್ನು ಗಮನಿಸಬಹುದು ಮತ್ತು ಪ್ರಸ್ತುತ ವರ್ಷದಲ್ಲಿ ಸಾಕಷ್ಟು ಅವಕಾಶಗಳನ್ನು ಒದಗಿಸಿ ಹಣಕಾಸಿನ ಸ್ಥಿತಿಯನ್ನು ಸಧೃಡಗೊಳಿಸಲಾಗುವುದೆಂದು ತಿಳಿಸಲು ಅಪೇಕ್ಷಿಸುತ್ತೇನೆ.
  5. 2024-25 ಮತ್ತು 2025-26ನೇ ಸಾಲುಗಳಿಗೆ ಸರಾಸರಿ 8ರ ಬೆಳವಣಿಗೆಯೊಂದಗೆ ಪ್ರಮುಖ ಹಣಕಾಸು ಬಾಬ್ತುಗಳಲ್ಲಿ ಸಾಧಿಸಬಹುದಾದ ಗುರಿಗಳನ್ನು ಹಾಕಿಕೊಳ್ಳಲಾಗಿದೆ. 2024-25ನೇ ಸಾಲಿನಲ್ಲಿ ನಿವ್ವಳ ಲಾಭದ ಗುರಿಯನ್ನು ರೂ. 120.00 ಲಕ್ಷಗಳಿಗೆ ಹಾಗೂ 2025-26ನೇ ಸಾಲಿನಲ್ಲಿ 130.00 ಲಕ್ಷಗಳಿಗೆ ನಿಗದಿಪಡಿಸಿರುತ್ತೇವೆ. ಮುಂದಿನ ದಿನಗಳಲ್ಲಿ, ಸಹಕಾರಿಯ ಸ್ವಂತ ನಿಧಿಗಳನ್ನು ಬಲಪಡಿಸಿಕೊಂಡು, ಇನ್ನಷ್ಟು ಆರ್ಥಿಕವಾಗಿ ಸಧೃಡ ಹೊಂದಲು ಬೇಕಾದಂತಹ ಕ್ರಮವಿಡಲು ನಿರ್ಧರಿಸಿದ್ದೇವೆ. ನಿಮ್ಮೆಲ್ಲರ ಸಹಕಾರ ಹಾಗೂ ಪ್ರೋತ್ಸಾಹ ಮತ್ತು ಸಹಕಾರಿಯ ವ್ಯವಹಾರದಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುವುದರಿಂದ, ಆಡಳಿತ ಮಂಡಳಿ ವರದಿಯಲ್ಲಿ ವಿವರಿಸಿರುವಂತೆ ನಿಗದಿತ ಗುರಿಯನ್ನು ಮುಟ್ಟುವ ವಿಶ್ವಾಸವನ್ನು ಹೊಂದಿದ್ದೇವೆ.
  6. ನಮ್ಮ ಸಹಕಾರಿಯ ಹೂಡಿಕೆ ರೂ. 2.50 ಕೋಟಿಯಷ್ಟು ಶ್ರೀ. ಗುರುರಾಘವೇಂದ್ರ ಸಹಕಾರಿ ಬ್ಯಾಂಕಿನಲ್ಲಿ ಮಾಡಿದ್ದು ತಮ್ಮೆಲ್ಲರ ಗಮನಕ್ಕೆ ಈಗಾಗಲೆ ತರಲಾಗಿದೆ. ಇದು ಕೂಡ ನಮ್ಮ ಕಳವಳಕ್ಕೆ ಕಾರಣವಾಗಿದೆ. ನಮ್ಮ ಠೇವಣಿ ವಾಪಸ್ ಪಡೆಯುವ ಭರವಸೆ ಇದ್ದರೂ ಕೂಡ, ಸದರಿ ಠೇವಣಿಯ ಅಪಾಯದ ಆತಂಕ ಇದ್ದೆ ಇರುತ್ತದೆ. ಆದ್ದರಿಂದ, ಪ್ರಸ್ತುತ ವರ್ಷದಿಂದ ಬ್ಯಾಂಕಿನ ಲಾಭಾಂಶದಲ್ಲಿ ಹೆಚ್ಚಿನ ಅವಕಾಶವನ್ನು ಮಾಡಲಾಗಿದ್ದು, ಪ್ರಸ್ತುತ ರೂ. 45.85 ಲಕ್ಷಗಳ ಪ್ರಾವಿಷನ್ ಇರುತ್ತದೆ. ಮುಂದಿನ ವರ್ಷದಿಂದ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಿ, ಸಹಕಾರಿ ಸಂಘದ ಆರ್ಥಿಕ ಬಲಿಷ್ಠತೆ ಹೆಚ್ಚಿಸಲು ಕ್ರಮವಿಡಲಾಗುವುದು.
  7. ಸಹಕಾರಿಯ ರಾಯಚೂರು ಶಾಖೆಯ ಪ್ರಗತಿ :
  8. ಸಹಕಾರಿಯ ವ್ಯವಹಾರವನ್ನು ವೃದ್ಧಿಸುವ ಉದ್ದೇಶಕ್ಕಾಗಿ ರಾಯಚೂರಿನಲ್ಲಿ ಹೊಂದಿರುವ ಶಾಖೆಯ ವ್ಯವಹಾರಗಳನ್ನು ವೃದ್ಧಿಸುವುದರ ಮೂಲಕ ದಿನಾಂಕ: 31.03.2024ರ ಅಂತ್ಯಕ್ಕೆ ರೂ. 36.53ಲಕ್ಷಗಳ ಲಾಭ ಗಳಿಸಿರುವುದನ್ನು ತಿಳಿಸಲು ತುಂಬಾ ಹರ್ಷವಾಗುತ್ತದೆ. ದಿನಾಂಕ: 31.03.2023ರ ಅಂತ್ಯಕ್ಕೆ ಶಾಖೆಯ ಲಾಭ ರೂ. 21.75 ಲಕ್ಷಗಳಿತ್ತು. ಶಾಖೆ ಪ್ರಾರಂಭಗೊoಡು ಕೇವಲ ಐದು ವರ್ಷಗಳಲ್ಲಿ ಹಣಕಾಸು ವ್ಯವಹಾರಗಳಲ್ಲಿ ಪ್ರಗತಿಯನ್ನು ಸಾಧಿಸುವುದರ ಜೊತೆಗೆ ಲಾಭಾಂಶ ಗಳಿಸಿರುವುದು ಶುಭ ಸೂಚಕವಾಗಿರುತ್ತದೆ. ಶಾಖೆಯ ಹಣಕಾಸು ವ್ಯವಹಾರಗಳನ್ನು ವೃದ್ಧಿಗೊಳಿಸಿ ಲಾಭಾಂಶದ ಪ್ರಮಾಣವನ್ನು ಹೆಚ್ಚಿಸಲು ಅಗತ್ಯ ಕ್ರಮವಿಡಲಾಗಿದೆ.
  9. ನಿವ್ವಳ ಲಾಭ ಮತ್ತು ಲಾಭಾಂಶ:
  10. ವರದಿ ವರ್ಷ ಅಂದರೆ 2023-24ನೇ ಸಾಲಿನಲ್ಲಿ ಸಹಕಾರಿಯು ರೂ. 110.00ಲಕ್ಷ ನಿವ್ವಳ ಲಾಭಗಳಿಸಿರುತ್ತದೆ. 2022-23ನೇ ಸಾಲಿನಲ್ಲಿ ರೂ.104.78ಲಕ್ಷ ಲಾಭ ಗಳಿಸಿತ್ತು. ನಮ್ಮ ಸಹಕಾರಿಯು 2013-14ರಿಂದ ಅಂದರೆ ಸಹಕಾರಿಯ ಪ್ರಾರಂಭ ವರ್ಷದಿಂದ ಲಾಭಾಂಶದಲ್ಲಿ ಡಿವಿಡೆಂಡ ವಿತರಿಸಲಾಗಿತ್ತು ಹಾಗೂ ಕಳೆದ ವರ್ಷ ಶೇಕಡಾ 10ರಷ್ಟು ಡಿವಿಡೆಂಡ್ ನೀಡಲಾಗಿತ್ತು. ಆಡಳಿತ ಮಂಡಳಿಯು 2023-24ರ ಸಾಲಿಗೆ ಡಿವಿಡೆಂಡ ಅನ್ನು ಶೇಕಡಾ 10ರಂತೆ ಪಾವತಿಸಲು ಶಿಫಾರಸ್ಸು ಮಾಡಿರುತ್ತದೆ. 2023-24ರ ಸಾಲಿನ ಡಿವಿಡೆoಡ್ ಘೋಷಣೆ ಬಗ್ಗೆ ವ್ಯಾಪಕ ಚರ್ಚೆ ಹಾಗೂ ಸೂಕ್ತ ತೀರ್ಮಾನ ತೆಗೆದುಕೊಳ್ಳುವುದು ಸೂಕ್ತವೆಂದು ಅಭಿಪ್ರಾಯ ಪಟ್ಟಿರುತ್ತದೆ.
  11. ಸಹಕಾರಿಯ ವೆಬ್‌ಸೈಟ್ ಅನ್ನು 10ನೇ ಸಾಮಾನ್ಯ ಸಭೆಯಲ್ಲಿ ಅನಾವರಣ ಮಾಡಲಾಗಿದೆ. ಇದರಿಂದಾಗಿ ಸದಸ್ಯರ ಹಾಗೂ ಸಹಕಾರಿಯ ಸಂಬoಧ ಬಹಳ ಸಮೀಪವಾಗಿದೆ ಮತ್ತು ಸುಲಲಿತ ಹಾಗೂ ಸರಳವಾಗಿ ಸಂಪರ್ಕಿಸಲು ಬಹಳ ಅನುಕೂಲವಾಗಿದೆ. ಮಾನ್ಯ ಸದಸ್ಯರು ಇದರ ಪ್ರಯೋಜನ ಪಡೆಯಬೇಕೆಂದು ತಮ್ಮಲ್ಲಿ ಕೋರುತ್ತೇನೆ.
  12. ಸಹಕಾರಿಯ ಅಭಿವೃದ್ಧಿ ದೃಷ್ಠಿಯಿಂದ, ಆಡಳಿತ ಮಂಡಳಿ ನಿರ್ದೇಶಕರುಗಳ ಅಧ್ಯಯನ ಪ್ರವಾಸವನ್ನು ಪ್ರಸಕ್ತ ಸಾಲಿನಲ್ಲಿ ಗುಜರಾತ ರಾಜ್ಯದಲ್ಲಿರುವ ಪ್ರತಿಷ್ಠಿತ ಸಹಕಾರಿ ಸಂಸ್ಥೆಗಳಿಗೆ ಭೇಟಿ ಮಾಡುವ ಮೂಲಕ ಅಧ್ಯಯನ ಮಾಡಲು ಹಮ್ಮಿಕೊಳ್ಳಲಾಗಿದೆ, ರಾಯಚೂರು ಶಾಖೆಯಲ್ಲಿ ಪಿಗ್ಮಿ ಠೇವಣಿ ಯೋಜನೆ ಅನುಷ್ಠಾನ ಮಾಡಲಾಗಿದೆ. ಎನ್.ಕೆ.ಕೆ. ಚಾರಿಟೇಬಲ್ ಟ್ರಸ್ಟ್ ನೋಂದಣಿ ಹಾಗೂ ಜಂಟಿ ಸಹಭಾಗಿತ್ವದ ಸಹೋದ್ಯಮಗಳಲ್ಲಿ ಭಾಗವಹಿಸುವಿಕೆ ವಿಷಯಗಳಲ್ಲಿ ನಿರೀಕ್ಷಿತ ಮಟ್ಟಕ್ಕೆ ಬೆಳವಣಿಗೆ ಇರುವುದಿಲ್ಲ. ಮುಂದಿನ ದಿನಗಳಲ್ಲಿ, ಈ ಬಗ್ಗೆ ಗಮನಿಸಿ, ಪ್ರಸ್ತಾವನೆಗಳನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನ ಮಾಡಲಾಗುವುದು.
  13. ಕೃತಜ್ಞತೆಗಳು :
  14.  ನಮ್ಮ ಸಹಕಾರಿಯ ಸರ್ವಾಂಗೀಣ ಪ್ರಗತಿಗೆ ಮತ್ತು ಸಹಕಾರಿಯಲ್ಲಿ ಇಟ್ಟಿರುವ ನಂಬಿಕೆ ಹಾಗೂ ವಿಶ್ವಾಸಕ್ಕೆ ಕಾರಣ
  15. ಕರ್ತರಾದ ಸನ್ಮಾನ್ಯ ಸದಸ್ಯರಿಗೆ ಹಾಗೂ ಅಧ್ಯಕ್ಷನಾಗಿ ನನ್ನ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ನನಗೆ ಬೆಂಬಲ, ಸಕ್ರೀಯ ಸಹಕಾರ ನೀಡಿದ ಆಡಳಿತ ಮಂಡಳಿಯ ಎಲ್ಲಾ ನಿರ್ದೇಶಕರುಗಳಿಗೆ, ಆರ್ಥಿಕ ಸಲಹೆಗಾರರಾದ ಶ್ರೀ. ಮೇಲಪ್ಪ.ಇ.ಸಿ, ನಮ್ಮ ಲೆಕ್ಕಪರಿಶೋಧಕರಾದ ಮೆ// ಬಿ.ಎಸ್.ಚಂದ್ರಶೇಖರ್ & ಕೋ. ಚಾರ್ಟರ್ಡ್ ಅಕೌಂಟೆoಟ್ಸ್ ಹಾಗೂ ಸಹಕಾರಿಯ ಸಮರ್ಪಕ ಕಾರ್ಯನಿರ್ವಹಣೆಯಲ್ಲಿ ಅಗತ್ಯ ಮಾರ್ಗದರ್ಶನ ನೀಡಿರುವ ಸಹಕಾರ ಇಲಾಖೆಗೂ, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಅಧ್ಯಕ್ಷರಿಗೂ, ವ್ಯವಸ್ಥಾಪಕ ನಿರ್ದೇಶಕರಿಗೂ, ಸಹಕಾರಿಯು ವ್ಯವಹರಿಸುತ್ತಿರುವ ಅಪೆಕ್ಸ್ ಬ್ಯಾಂಕು, ಐಡಿಬಿಐ ಬ್ಯಾಂಕು, ಕರೂರು ವೈಶ್ಯ ಬ್ಯಾಂಕು, ಉಜ್ಜೀವನ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಹಾಗೂ ಶ್ಯಾಮರಾವ್ ವಿಠಲ್ ಕೋ-ಆಪರೇಟಿವ್ ಬ್ಯಾಂಕಿನ ವ್ಯವಸ್ಥಾಪಕರುಗಳಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಕೃತಜ್ಞತೆಯನ್ನು ಅರ್ಪಿಸುತ್ತೇನೆ. ಅರ್ಪಣಾ ಮನೋಭಾವದಿಂದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಶ್ರೀ. ಮಂಜುನಾಥಪ್ಪ.ಕೆ ಮತ್ತು ವ್ಯವಸ್ಥಾಪಕರಾಗಿರುವ ಶ್ರೀ. ವಾಸುಗೊಲ್ಲ ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರಿಗೂ ನನ್ನ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ. ಕೊನೆಯದಾಗಿ, ತಮ್ಮೆಲ್ಲರ ಸಹಕಾರ ಹಾಗೂ ಪ್ರೋತ್ಸಾಹದಿಂದ ನಮ್ಮ ಸಹಕಾರಿಯು ಇನ್ನೂ ಹೆಚ್ಚಿನ ಪ್ರಗತಿಯನ್ನು ಸಾಧಿಸಲಿ ಎಂದು ಈ ಸಂದರ್ಭದಲ್ಲಿ ಆಶಿಸುತ್ತಾ, ಈ ದಿನದ 2023-24ರ ಸಾಲಿನ ಮಹಾಸಭೆಗೆ ಮತ್ತೊಮ್ಮೆ ತಮ್ಮೆಲ್ಲರನ್ನೂ ಹೃತ್ಪೂರ್ವಕವಾಗಿ ಸ್ವಾಗತಿಸುತ್ತಾ ಮತ್ತು ಸಭೆಯ ಕಾರ್ಯಸೂಚಿಯಂತೆ ವಿಷಯಗಳನ್ನು ವಿವರವಾಗಿ ಚರ್ಚಿಸಿ ಅದರ ಅನುಮೋದನೆ ನೀಡಬೇಕೆಂದು ವಿನಂತಿಸುತ್ತಾ ತಮ್ಮೆಲ್ಲರನ್ನೂ ಸಹಕಾರಿಯ 12ನೇ ವಾರ್ಷಿಕ ಸಾಮಾನ್ಯ ಸಭೆಗೆ ಹೃತ್ಪೂರ್ವಕವಾಗಿ ಮತ್ತೊಮ್ಮೆ ಸ್ವಾಗತಿಸುತ್ತೇನೆ.
ಜೈ ಹಿಂದ್ – ಜೈ ಸೌಹಾರ್ದ ಸಹಕಾರ – ಜೈ ಕರ್ನಾಟಕ