ಅಧ್ಯಕ್ಷರ ಭಾಷಣ
ದಿನಾಂಕ: 30.08.2026 ರಂದು 2025-26ರ ವಾರ್ಷಿಕ ಸಾಮಾನ್ಯ ಸಭೆಯ Video Conference and
Virtual Meeting ನಲ್ಲಿ ಅಧ್ಯಕ್ಷರು ಮಾಡಿದ ಪ್ರಸ್ತಾವಿಕ ಹಾಗು ಸ್ವಾಗತ ಭಾಷಣದ ವಿವರಗಳು.
14ನೇ ವಾರ್ಷಿಕ ಸಾಮಾನ್ಯ ಸಭೆ
ಮಾನ್ಯರೆ,
ನವಕಲ್ಯಾಣ ಕರ್ನಾಟಕ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿಯಮಿತ ಇದರ ಹದಿನಾಲ್ಕನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿದ ಹಾಗೂ ಆನ್‌ಲೈನ್‌ನಲ್ಲಿ ಭಾಗವಹಿಸಿದ ಎಲ್ಲಾ ಸದಸ್ಯರನ್ನು ನಾನು ಅತ್ಯಂತ ಆತ್ಮೀಯವಾಗಿ ಸ್ವಾಗತಿಸುತ್ತೇನೆ. ನಮ್ಮ ಸಹಕಾರಿಯು 2012ರ ಸಾಲಿನಲ್ಲಿ ಪ್ರಾರಂಭಗೊಡು, ಪ್ರಸ್ತುತ ಹದಿನಾಲ್ಕು ವರ್ಷಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಹದಿನೈದನೇ ವರ್ಷದಲ್ಲಿ ಮುನ್ನಡೆಯುತ್ತಿದೆ. ಕಳೆದ ಹದಿನಾಲ್ಕು ವರ್ಷಗಳಲ್ಲಿ ನಿಮ್ಮ ಸಹಕಾರಿಯು ಎಲ್ಲಾ ಸದಸ್ಯರ ಪ್ರೀತಿ, ವಿಶ್ವಾಸ, ಅಭಿಮಾನ ಹಾಗೂ ಸಹಕಾರದಿಂದ ವರ್ಷದಿಂದ ವರ್ಷಕ್ಕೆ ಎಲ್ಲಾ ಆರ್ಥಿಕ ವಿಷಯಗಳಲ್ಲಿ ಉತ್ತಮವಾದ ಬೆಳವಣಿಗೆಯನ್ನು ದಾಖಲಿಸಿದೆ. ಹಿಂದಿನ ವರ್ಷಕ್ಕೆ ಹೋಲಿಸಿದಲ್ಲಿ ನಮ್ಮ ಸಹಕಾರಿಯು ಎಲ್ಲಾ ಪ್ರಮುಖ ಹಣಕಾಸು ವಿಷಯಗಳಲ್ಲಿ ಬೆಳವಣಿಗೆಯನ್ನು ಸಾಧಿಸಿರುವುದನ್ನು ಗುರುತಿಸಬಹುದು.
- ದಿನಾಂಕ: 01.06.2025 ರಂದು ನಡೆದ ಸಹಕಾರಿಯ ಹದಿಮೂರನೇ ವಾರ್ಷಿಕ ಸಾಮಾನ್ಯ ಸಭೆಯ ನಡವಳಿಗಳು ಹಾಗೂ ದಿನಾಂಕ:31.03.2026ಕ್ಕೆ ಅಂತ್ಯಗೊಡ ಲೆಕ್ಕ ಪರಿಶೋಧಕರ ವರದಿ ಹಾಗೂ ಸದರಿ ಸಾಲಿನ ಹಣಕಾಸು ತ:ಖ್ತೆಗಳನ್ನು ಮತ್ತು ವಾರ್ಷಿಕ ವರದಿಯನ್ನು ಈಗಾಗಲೇ ತಮಗೆ ಇ-ಮೇಲ್ ಮುಖಾಂತರ ಕಳುಹಿಸಲಾಗಿದ್ದ್ದು, ಅವುಗಳನ್ನು ಓದಿರುವಿರೆಂದು ನಾನು ಭಾವಿಸುತ್ತೇನೆ.
- ವರದಿ ವರ್ಷದಲ್ಲಿ ಸಹಕಾರಿಯ ಷೇರು ಬಂಡವಾಳ, ಠೇವಣಿಗಳು, ಹೂಡಿಕೆಗಳು, ಸಾಲಗಳು, ದುಡಿಯುವ ಬಂಡವಾಳ, ಲಾಭಾಂಶ ಮತ್ತು ಒಟ್ಟು ವ್ಯವಹಾರದಲ್ಲಿ ಸಕಾರಾತ್ಮಕ ಬೆಳವಣಿಗೆ ಸಾಧಿಸಿರುವುದನ್ನು ಗುರುತಿಸಬಹುದಾಗಿದೆ. ಸದಸ್ಯರ ಸಕ್ರೀಯ ಸಹಕಾರ, ಆಡಳಿತ ಮಂಡಳಿ ಸದಸ್ಯರ ಹಾಗೂ ಸಹಕಾರಿಯ ಸಿಬ್ಬಂದಿಯ ಸಂಪೂರ್ಣ ಸಹಕಾರದಿಂದ ಈ ಪ್ರಗತಿಯನ್ನು ಸಾಧಿಸಲಾಗಿದೆಯೆಂದು ಅಭಿಮಾನ ಪೂರ್ವಕವಾಗಿ ಹೇಳಲು ಅಪೇಕ್ಷಿಸುತ್ತೇನೆ.
- ವರದಿ ಸಾಲಿನಲ್ಲಿ, ಸಾಲ ವಿತರಣೆಯ ವಿಷಯದಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ವಹಿಸಲಾಗಿದೆ ಹಾಗೂ ವಸೂಲಾತಿ ಬಗ್ಗೆ ಕಾನೂನು ಕ್ರಮಗಳು ಸೇರಿದಂತೆ ಬಹಳಷ್ಟು ಕ್ರಮಗಳನ್ನು ಕೈಗೊಂಡು, ಸಾಲ ಖಾತೆಗಳನ್ನು ಸುಸ್ಥಿತಿಯಲ್ಲಿಡುವ ಪ್ರಯತ್ನ ಮಾಡಲಾಗಿದೆ ಮತ್ತು ಸತತ ಪ್ರಯತ್ನದಿಂದ ಕೆಲವು ಸಾಲಗಾರರಿಂದ ಏಕ ಕಾಲಿಕ ತೀರುವಳಿಯಲ್ಲಿ ಸಾಲ ವಸೂಲಾತಿ ಮಾಡಿ ಕೆಲ ಸುಸ್ತಿ ಸಾಲ ಖಾತೆಗಳನ್ನು ಚುಕ್ತಗೊಳಿಸಲಾಗಿದೆ.
- ವರದಿ ಸಾಲಿನಲ್ಲಿ, ಎಲ್ಲಾ ಬ್ಯಾಂಕ್ ಗಳು ಬಡ್ಡಿ ದರಗಳನ್ನು ಇಳಿಕೆ ಮಾಡಿದ್ದು, ನಮ್ಮ ಠೇವಣಿಗಳ ಮೇಲಿನ ಬಡ್ಡಿ ದರಗಳಲ್ಲಿ ದಿನಾಂಕ: 22.12.2025 ರಿಂದ ಜಾರಿಗೆ ಬರುವಂತೆ 0.50% ರಷ್ಟು ಕಡಿತಗೊಳಿಸಲಾಗಿದೆೆ. ಸದಸ್ಯರು ತಮ್ಮ ಹೆಚ್ಚುವರಿ ಸಂಪನ್ಮೂಲಗಳನ್ನು ಠೇವಣಿಗಳಲ್ಲಿ ತೊಡಗಿಸಲು ಕೋರಲಾಗಿದೆ.
- 2025-26 ನೇ ಸಾಲಿನಲ್ಲಿ ಸರಾಸರಿ 20ರ ಬೆಳವಣಿಗೆ ಸಾಧಿಸಲಾಗಿದ್ದು, 2026-27 ಮತ್ತು 2027-28ನೇ ಸಾಲುಗಳಿಗೆ ಸರಾಸರಿ 17-18ರ ಬೆಳವಣಿಗೆಯೊಂದಗೆ, ನಿವ್ವಳ ಲಾಭದ ಗುರಿಯನ್ನು ಕ್ರಮವಾಗಿ ರೂ. 1.61 ಕೋಟಿಗಳಿಗೆ ಹಾಗೂ ರೂ.1.70 ಕೋಟಿಗಳಿಗೆ ನಿಗದಿಪಡಿಸಿರುತ್ತೇವೆ. ನಿಮ್ಮೆಲ್ಲರ ಸಹಕಾರ, ಪ್ರೋತ್ಸಾಹ ಮತ್ತು ಸಹಕಾರಿಯ ವ್ಯವಹಾರದಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುವುದರಿಂದ, ಆಡಳಿತ ಮಂಡಳಿ ವರದಿಯಲ್ಲಿ ವಿವರಿಸಿರುವಂತೆ ನಿಗದಿತ ಗುರಿಯನ್ನು ಮುಟ್ಟುವ ವಿಶ್ವಾಸವನ್ನು ಹೊಂದಿದ್ದೇವೆ.
- ನಮ್ಮ ಸಹಕಾರಿಯ ವ್ಯವಹಾರವು ದಿನೇ ದಿನೇ ವೃದ್ಧಿಯಾಗುತ್ತಿರುವುದರಿಂದ, ಸಹಕಾರಿಗೆ ಸ್ವಂತ ಕಟ್ಟಡ ಹೊಂದಲು ಮಾನ್ಯ ಸದಸ್ಯರುಗಳು ದಿನಾಂಕ: 10.09.2023 ಮತ್ತು 01.09.2024 ರಂದು ನಡೆದ 11 ಮತ್ತು 12ನೇ ವಾರ್ಷಿಕ ಸಾಮಾನ್ಯ ಸಭೆಗಳಲ್ಲಿ ಕೋರಿದ ಹಿನ್ನಲೆಯಲ್ಲಿ, ಬೆಂಗಳೂರಿನ ರಾಜಾಜಿನಗರ, ಪದ್ಮಭೂಷಣ ಡಾ. ರಾಜ್‌ಕುಮಾರ್ ರಸ್ತೆ (80 ಅಡಿ ರಸ್ತೆ), ಪ್ರಕಾಶ್ ನಗರ, ಬೆಂಗಳೂರು, ಪಿಐಡಿ ಸಂ. 23-31-79, ವಾರ್ಡ ನಂ 23, ಇಲ್ಲಿರುವ 29.6*45 ಅಡಿ ಅಳತೆಯ, 1332 ಚದರ ಅಡಿ ವಿಸ್ತೀರ್ಣವುಳ್ಳ ಮೂಲೆ ನಿವೇಶನದ ಹಳೇ ಕಟ್ಟಡ ಸಂಖ್ಯೆ: 79(ಹಳೇ ಸಂ. 9) ಅನ್ನು ಖರೀದಿಸಿದ್ದು, ರಾಜಾಜಿನಗರ ನೋಂದಣಿ ಕಛೇರಿಯಲ್ಲಿ ನೋಂದಾಯಿಸಲಾಗಿದ್ದು, ದಿ: 01.06.2025 ರ ಸಾಮಾನ್ಯ ಸಭೆಯಲ್ಲಿ ಅನುಮೋದನೆ ಪಡೆಯಲಾಗಿದೆ. ನಿವೇಶನ ಖರೀದಿ ಬಾಬ್ತು ಮೀಸಲು ನಿಧಿಗಳಿಂದ ಒಟ್ಟು ರೂ. 4.04 ಕೋಟಿಗಳನ್ನು ಸಾಲ ಪಡೆಯಲಾಗಿದೆ.
ಸದರಿ ಮೂಲೆ ನಿವೇಶನದಲ್ಲಿ ಹೊಸ ಕಟ್ಟಡ ಕಟ್ಟಲು ಬಿಬಿಎಂಪಿಯಿಂದ ಅನುಮತಿ ಪತ್ರ ಮತ್ತು ನಕ್ಷೆ ಮಂಜೂರಾತಿ ಪಡೆದಿದ್ದು, ಸದರಿ ನಿವೇಶನದಲ್ಲಿ, ಕಟ್ಟಡ ಕಟ್ಟಲು ಅಂದಾಜು ರೂ.1.70 ಕೋಟಿ ಸಿವಿಲ್ ಕಾಮಗಾರಿಗೆ ಮತ್ತು ಅಂದಾಜು ರೂ. 50.00 ರಿಂದ 75.00 ಲಕ್ಷಗಳು ಒಳಾಂಗಣ ವಿನ್ಯಾಸಕ್ಕೆ ತಗಲಬಹುದು. ಈ ರ‍್ಚಗಳನ್ನು ಅಮಾನತ್ತು ಅಸ್ತಿ ಖಾತೆಗೆ ರ‍್ಚು ಹಾಕಿ ಪಾವತಿಸಲು ಹಾಗೂ ನರ‍್ಮಾಣ ಕರ‍್ಯಪರ‍್ಣಗೊಂಡ ನಂತರ ಸಹಕಾರಿಯ ಮೀಸಲು ನಿಧಿ, ಕಾರ್ಯಾಚರಣಾ ಮೀಸಲು ನಿಧಿ, ಸಾಮಾನ್ಯ ಕ್ಷೇಮಾಭಿವೃದ್ಧಿ ಮತ್ತು ಕಟ್ಟಡ ನಿಧಿಗಳನ್ನು ನಿಯಾಮಾನುಸಾರ ಉಪಯೋಗಿಸಿಕೊಂಡು ಅಮಾನತ್ತು ಅಸ್ತಿ ಖಾತೆಯನ್ನು ಚುಕ್ತಗೊಳಿಸಲು ಅನುಮತಿಸುವುದು.
- ಶ್ರೀ. ಲೋಕೇಶ್ ಸಿ. ಸಾಲದ ಖಾತೆಗಳು ಮುಕ್ತಾಯ ಹೊಂದಿರುವುದರಿಂದ 2026-27 ಸಾಲಿಗೆ ಅಂದಾಜು ರೂ. 2.50 ಕೋಟಿಗಳಷ್ಟು ಹೆಚ್ಚಿನ ಆದಾಯ ಬಂದಿರುತ್ತದೆ. ಇದರಿಂದಾಗಿ, 2026-27 ನೇ ಸಾಲಿನ ಆದಾಯ-ರ‍್ಚುಗಳ ಅಂದಾಜು(ಬಜೆಟ್) ಬದಲಾವಣೆಯಾಗುತ್ತದೆ. ಇದರಲ್ಲಿ ಮುಖ್ಯವಾಗಿ ರೂ. 2.00 ಕೋಟಿಯಷ್ಟು ನಿವೇಶನ ಖರೀದಿಸಲು ಪಡೆದ ಸಾಲವನ್ನು ಮರುಪಾವತಿ ಮಾಡಲು ಹಾಗೂ ಕಟ್ಟದ ನರ‍್ಮಾಣ ಕರ‍್ಯ ಪರ‍್ಣಗೊಂಡ ಬಳಿಕ ಇದರ ಪ್ರಾರಂಭೋತ್ಸವ ಸಂರ‍್ಭದಲ್ಲಿ ಸಹಕಾರಿಯ ಸಂಸ್ಥಾಪಕರ ದಿನಾಚರಣೆ ಆಚರಿಸಿ ಅವರುಗಳನ್ನು ಸನ್ಮಾನಿಸಲಾಗುವುದು. ಈ ಸಮಾರಂಭವನ್ನು ಅದ್ಧೂರಿಯಾಗಿ ಆಚರಿಸಲು ರೂ. 50.00 ಲಕ್ಷಗಳನ್ನು 2026-27 ರ ಲಾಭದಲ್ಲಿ ಅವಕಾಶ (ಪ್ರಾವಿಷನ್) ಕಲ್ಪಿಸಲಾಗುವುದು. ಈ ವಿಷಯವನ್ನು ಅನುಮೋದಿಸಿ ಕೊಡಬೇಕೆಂದು ಕೋರುತ್ತೇನೆ.
ಶ್ರೀ. ಲೋಕೇಶ್ ಸಿ ಮತ್ತು ಇವರ ಕುಟುಂಬದವರಿಗೆ ನೀಡಿದ ಸಾಲಗಳ ಸುಸ್ತಿ ಬಾಕಿ ವಸೂಲಿ ಕುರಿತು ಕೈಗೊಂಡ ಕ್ರಮಗಳ ಬಗ್ಗೆ ವಿಷಯ ಸಂಖ್ಯೆ 19, (ಪುಟ ಸಂಖ್ಯೆ 12 ರಿಂದ 14) ರಲ್ಲಿ ವಿವರಿಸಲಾಗಿದೆ. ಮುಂದುವರಿದು, ಅವರು ಸಾಲದ ಭದ್ರತೆಗಾಗಿ ಅಡಮಾನ ಮಾಡಿದ ಸ್ಥಿರಾಸ್ಥಿಗಳ್ಲಿ ಒಂದು ಕಟ್ಟಡವನ್ನು ಸಹಕಾರಿಯ ಹೆಸರಿಗೆ ದಿನಾಂಕ: 28.08.2026 ರಂದು ನೋಂದಣಿ ಮಾಡಿಸಿಕೊಂಡು ಸಾಲದ ಖಾತೆಗಳನ್ನು ಚುಕ್ತಗೊಳಿಸಲಾಗಿದೆ. ಸದರಿ ಕಟ್ಟಡವು 40*65 ಮೂಲೆ ನಿವೇಶನ ಇದ್ದು, ಸುಮಾರು 10,000 ಚದರ ಅಡಿ ಕಟ್ಟಡ ಇದ್ದು, ಇದರಿಂದ ಪ್ರಸ್ತುತವಾಗಿ ಪ್ರತೀ ತಿಂಗಳು ರೂ. 3.00 ಲಕ್ಷ ಬಾಡಿಗೆ ಬರುತ್ತಿದೆ. ಈ ಕಟ್ಟಡದ ಬಗ್ಗೆ ವಿರ‍್ಶಿಸಿ, ಇನ್ನೂ ಹೆಚ್ಚಿನ ಬಾಡಿಗೆ ಪಡೆಯಲು ಅವಕಾಶವಿದೆಯೆಂದು ಅನಿಸುತ್ತದೆ. ಮುಂದಿನ ದಿನಗಳಲ್ಲಿ,ಈ ಬಗ್ಗೆ ತರ‍್ಮಾನ ತೆಗೆದುಕೊಳ್ಳಲಾಗುವುದು. ಈ ಬಗ್ಗೆ ಆದ ಬೆಳವಣಿಗೆಗಳನ್ನು ಮುಂದಿನ ಸಾಮಾನ್ಯ ಸಭೆಯ ಮುಂದೆ ಮಂಡಿಸಲಾಗುವುದು.
- ಸಹಕಾರಿ ಸಂಘದ ಬೆಳವಣಿಗೆ ದೃಷ್ಥಿಯಿಂದ ಮುಂದಿನ ದಿನಗಳಲ್ಲಿ ಜಂಟಿ ಸಾಹಸೋಧ್ಯಮಗಳಲ್ಲಿ ಭಾಗವಹಿಸಲು ಅನುಕೂಲವಾಗುವಂತೆ “ಸಾಹಸೋಧ್ಯಮ ಬಂಡವಾಳ (ವೆಂಚರ್ ಕ್ಯಾಪಿಟಲ್) “ ಎಂದು ಹೊಸ ನರ‍್ದಿಷ್ಟ ಮೀಸಲನ್ನು ಸೃಷ್ಠಿಸಲು ತರ‍್ಮಾನಿಸಿದ್ದು, ಇದರಿಂದ ಸದಸ್ಯರಿಗೆ /ಸದಸ್ಯರ ಮಕ್ಕಳು ಹೊಸ ಸ್ಟರ‍್ಟಪ್ ಕಂಪನಿಗಳನ್ನು ಸ್ಥಾಪಿಸಿದಾಗ, ಅದರಲ್ಲಿ ನಮ್ಮ ಸಂಘವು ನಿಯಮಗಳಂತೆ ಷೇರು ಬಂಡವಾಳ ಹೂಡಲು ಅನುಕೂಲವಾಗುತ್ತದೆ. ಪ್ರತಿ ರ‍್ಷದ ಲಾಭಾಂಶದಲ್ಲಿ ಶಾಸನಬದ್ದ ಮೀಸಲು ಗಳಿಗೆ ಮತ್ತು ಡಿವಿಡೆಂಡ್ ಹಂಚಿಕೆಗೆ ತೆಗೆದಿರಿಸಿದ ನಂತರ ಉಳಿಯುವ ಲಾಭಾಂಶದಲ್ಲಿ ಶೇಕಡ 20.00 ರಷ್ಟು “ಸಾಹಸೋಧ್ಯಮ ಬಂಡವಾಳ (ವೆಂಚರ್ ಕ್ಯಾಪಿಟಲ್)“ ಗೆ ಪ್ರಾವಿಷನ್ ಮಾಡಲು ತರ‍್ಮಾನಿಸಬೇಕಾಗುತ್ತದೆ. ಈ ವಿಷಯ ರ‍್ಚೆಗೆ ಬಂದಾಗ ಅನುಮೋದಿಸಲು ಕೋರುತ್ತೇನೆ ಹಾಗೂ ಈ ಬಗ್ಗೆ ಏನಾದರೂ ಸಲಹೆ ಸೂಚನೆಗಳನ್ನು ನೀಡಲು ಕೋರುತ್ತೇನೆ.
- ಸಹಕಾರಿಯ ಆಡಳಿತ ಮಂಡಳಿಯ ಅವಧಿ ದಿನಾಂಕ: 31.03.2027 ಕ್ಕೆ ಮುಗಿಯಲಿದ್ದು, 2027-2032 ರ ಅವಧಿಗೆ ಹೊಸ ಆಡಳಿತ ಮಂಡಳಿಯನ್ನು ಆಯ್ಕೆ ಮಾಡಬೇಕಾಗುತ್ತದೆ. ಅಡಳಿತ ಮಂಡಳಿಗೆ ನರ‍್ದೇಶಕರುಗಳನ್ನು ಆಯ್ಕೆಗೊಳಿಸುವ ಪ್ರಕ್ರಿಯಿಗೆ ತಾವೆಲ್ಲರು ಸಹಕರಿಸಬೇಕೆಂದು ಕೋರುತ್ತೇನೆ. ನಮ್ಮ ಆಡಳಿತ ಮಂಡಳಿ ಸದಸ್ಯರ ಸರಾಸರಿ ವಯಸ್ಸು ಹೆಚ್ಚಿಗೆ ಇರುತ್ತದೆ. ಈ ಬಗ್ಗೆ ಸಂಯುಕ್ತ ಸಹಕಾರಿಯು ಮತ್ತು ಲೆಕ್ಕಪರಿಶೋಧಕರು ವಿಶ್ಲೇಷಣೆ ಮಾಡಿರುತ್ತಾರೆ. ಆದ್ದರಿಂದ, ಕೆಲ ಹಿರಿಯರು ನಿವೃತ್ತಿ ಹೊಂದಲು ಅಪೇಕ್ಷಿಸಿದ್ದು, ಯುವಕರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲು ಯೋಚಿಸಲಾಗಿದೆ. ಈ ಬಗ್ಗೆ ತಾವೂ ಕೂಡ ಸಲಹೆ – ಸೂಚನೆಗಳನ್ನು ನೀಡಲು ಕೋರಿದೆ.
- ನಿವ್ವಳ ಲಾಭ ಮತ್ತು ಲಾಭಾಂಶ:
2025-26ನೇ ªರದಿ ಸಾಲಿನಲ್ಲಿ ಸಹಕಾರಿಯು ರೂ. 1.53 ಕೋಟಿಗಳ ನಿವ್ವಳ ಲಾಭಗಳಿಸಿರುತ್ತದೆ. 2024-25ನೇ ಸಾಲಿನಲ್ಲಿ ರೂ.1.47 ಕೋಟಿಗಳ ಲಾಭ ಗಳಿಸಿತ್ತು. ನಮ್ಮ ಸಹಕಾರಿಯು 2013-14ರಿಂದ ಅಂದರೆ ಸಹಕಾರಿಯ ಪ್ರಾರಂಭ ವರ್ಷದಿಂದ ಲಾಭಾಂಶದಲ್ಲಿ ಡಿವಿಡೆಂಡ ವಿತರಿಸಲಾಗಿತ್ತು ಹಾಗೂ ಕಳೆದ ವರ್ಷ ಶೇಕಡಾ 11ರಷ್ಟು ಡಿವಿಡೆಂಡ್ ನೀಡಲಾಗಿತ್ತು. ಆಡಳಿತ ಮಂಡಳಿಯು 2025-26ರ ಸಾಲಿಗೆ ಡಿವಿಡೆಂಡ ಅನ್ನು ಶೇಕಡಾ 11ರಂತೆ ಪಾವತಿಸಲು ಶಿಫಾರಸ್ಸು ಮಾಡಿರುತ್ತದೆ. ಸಹಕಾರಿಗೆ ಸ್ವಂತ ಕಟ್ಟಡ ಹೊಂದುವ ಪ್ರಕ್ರಿಯೆ ಚಾಲ್ತಿಯಲ್ಲಿರುವುದರಿಂದ, 2025-26ರ ಸಾಲಿನ ಡಿವಿಡೆÀಂಡ್ ಘೋಷಣೆ ಬಗ್ಗೆ ವ್ಯಾಪಕ ಚರ್ಚೆ ಹಾಗೂ ಸೂಕ್ತ ತೀರ್ಮಾನ ತೆಗೆದುಕೊಳ್ಳುವುದು ಸೂಕ್ತವೆಂದು ಅಭಿಪ್ರಾಯ ಪಡಲಾಗಿದೆ..
- ಕೃತಜ್ಞತೆಗಳು :
ನಮ್ಮ ಸಹಕಾರಿಯ ಸರ್ವಾಂಗೀಣ ಪ್ರಗತಿಗೆ ಮತ್ತು ಸಹಕಾರಿಯಲ್ಲಿ ಇಟ್ಟಿರುವ ನಂಬಿಕೆ ಹಾಗೂ ವಿಶ್ವಾಸಕ್ಕೆ ಕಾರಣ ಕರ್ತರಾದ ಸನ್ಮಾನ್ಯ ಸದಸ್ಯರಿಗೆ ಹಾಗೂ ಅಧ್ಯಕ್ಷನಾಗಿ ನನ್ನ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ನನಗೆ ಬೆಂಬಲ, ಸಕ್ರೀಯ ಸಹಕಾರ ನೀಡಿದ ಆಡಳಿತ ಮಂಡಳಿಯ ಎಲ್ಲಾ ನಿರ್ದೇಶಕರುಗಳಿಗೆ, ಆರ್ಥಿಕ ಸಲಹೆಗಾರರಿಗೆ, ಲೆಕ್ಕಪರಿಶೋಧಕರಿಗೆ ಹಾಗೂ ಸಹಕಾರಿಯ ಸಮರ್ಪಕ ಕಾರ್ಯನಿರ್ವಹಣೆಯಲ್ಲಿ ಅಗತ್ಯ ಮಾರ್ಗದರ್ಶನ ನೀಡಿರುವ ಸಹಕಾರ ಇಲಾಖೆಗೆ, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಗೆ, ಸಹಕಾರಿಯು ವ್ಯವಹರಿಸುತ್ತಿರುವ ಎಲ್ಲಾ ಬ್ಯಾಂಕ್‌ಗಳ ವ್ಯವಸ್ಥಾಪಕರುಗಳಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಕೃತಜ್ಞತೆಯನ್ನು ಅರ್ಪಿಸುತ್ತೇನೆ. ಅರ್ಪಣಾ ಮನೋಭಾವದಿಂದ ಕಾರ್ಯ ನಿರ್ವಹಿಸುತ್ತಿರುವ ಮುಖ್ಯ ಕಾರ್ಯನಿರ್ವಾಹಕರಿಗೆ, ವ್ಯವಸ್ಥಾಪಕರಿಗೆ ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರಿಗೂ ನನ್ನ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ. ಕೊನೆಯದಾಗಿ, ತಮ್ಮೆಲ್ಲರ ಸಹಕಾರ ಹಾಗೂ ಪ್ರೋತ್ಸಾಹದಿಂದ ನಮ್ಮ ಸಹಕಾರಿಯು ಇನ್ನೂ ಹೆಚ್ಚಿನ ಪ್ರಗತಿಯನ್ನು ಸಾಧಿಸಲಿ ಎಂದು ಈ ಸಂದರ್ಭದಲ್ಲಿ ಆಶಿಸುತ್ತಾ, 2025-26ರ ಸಾಲಿನ ಈ ಮಹಾಸಭೆಗೆ ಮತ್ತೊಮ್ಮೆ ತಮ್ಮೆಲ್ಲರನ್ನೂ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ ಮತ್ತು ಸಭೆಯ ಕಾರ್ಯಸೂಚಿಯಂತೆ ವಿಷಯಗಳನ್ನು ವಿವರವಾಗಿ ಚರ್ಚಿಸಿ, ಅದರ ಅನುಮೋದನೆ ನೀಡಬೇಕೆಂದು ವಿನಂತಿಸುತ್ತಾ ತಮ್ಮೆಲ್ಲರನ್ನೂ ಸಹಕಾರಿಯ 14ನೇ ವಾರ್ಷಿಕ ಸಾಮಾನ್ಯ ಸಭೆಗೆ ಹೃತ್ಪೂರ್ವಕವಾಗಿ ಮತ್ತೊಮ್ಮೆ ಸ್ವಾಗತಿಸುತ್ತೇನೆ.
ಜೈ ಹಿಂದ್ – ಜೈ ಸೌಹಾರ್ದ ಸಹಕಾರ – ಜೈ ಕರ್ನಾಟಕ